ಎವೆಯೂತ: ಕೆಲವು ಸಸ್ಯಗಳಲ್ಲಿ, ಅದರಲ್ಲೂ ಬೀಜೋತ್ಪತ್ತಿಯುಳ್ಳವುಗಳಲ್ಲಿ, ಆಗುವ ತರುವಾಯದ (ಸೆಕಂಡರಿ) ಬೆಳೆವಣಿಗೆಯಲ್ಲಿ ಸಸ್ಯದ ವಿವಿಧ ಭಾಗಗಳಿಗೆ ನೀರನ್ನೊದಗಿಸುವ ಕ್ಸೈಲಂ ಪೇರೆಂಖೈಮ ಜೀವಕೋಶಗಳಲ್ಲುಂಟಾಗುವ ಊತಗಳು (ಟೈಲೋಸಿಸ್). ಈ ಊತಗಳು ಟ್ರೇಕಿಯ ಜೀವಕೋಶದ ಬಹುಪಾಲು ಭಾಗವನ್ನು ಆಕ್ರಮಿಸಿಕೊಂಡು ನೀರು ಮತ್ತು ಇತರ ಲವಣಾಂಶಗಳ ವಹನವನ್ನು ತಡೆಯುತ್ತವೆ. ಸಾಮಾನ್ಯವಾಗಿ ಇವು ಅನುಷಂಗಿಕ ಕ್ಸೈಲಂನಲ್ಲಿ ಕಂಡುಬರುತ್ತವೆ. ಕ್ಸೈಲಂ ಪೇರೆಂಖೈಮ ಜೀವಕೋಶದ ಕಣಬೀಜ ಹಾಗೂ ಇತರ ವಸ್ತುಗಳು ಈ ಊತದೊಳಕ್ಕೆ ಹರಿದುಹೋಗುತ್ತವೆ. ಎವೆಯೂತದ ಗೋಡೆ ತುಂಬ ತೆಳುವಾಗಿದ್ದು ಮೃದುವಾಗಿರುತ್ತದೆ; ದಪ್ಪನಾಗಿರುವುದು ಅಪರೂಪ. ಸಾಮಾನ್ಯವಾಗಿ ಹೂ ಬಿಡುವ ಸಸ್ಯಗಳಲ್ಲಿ ಬಣ್ಣವಿರುವ ಜೇಗುಭಾಗದಲ್ಲಿ ಇಂಥ ಊತಗಳು ಕಂಡು ಬರುತ್ತವೆ. 

ಇದರಿಂದಾಗಿ ವಯಸ್ಸು ಹೆಚ್ಚಿದಂತೆಲ್ಲ ಮರದ ವಿವಿಧ ಭಾಗಗಳ ಸುತ್ತಳತೆ ದೊಡ್ಡದಾಗುತ್ತ ಹೋಗುತ್ತದೆ. (ಬಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ